ಇಂದೆನ್ನ ಮನಸಿಗೆ ಮುಂದಿನ ನೆನಪಾಗಿ
ನಲಿದಿತ್ತು ನವಿಲಿನಂತೆ,
ಗರಿಬಿಚ್ಚಿ ಸೊಗಸಾಗಿ |
ಹಸಿರಿತ್ತು ಹೊನ್ನಿತ್ತು ,
ಮನವೆಲ್ಲ ಹಿಗ್ಗಿತ್ತು
ಮಳೆಯಲ್ಲಿ ಕುಣಿಕುಣಿದು ದಣಿವೆಲ್ಲ
ತಣಿದಿತ್ತು ||
ಕುಣಿವಾಗ ಕಂಡಿತ್ತು ಹಾರಾಡೊ ಗುಬ್ಬಿ
ತಾನೂ ಹಾರಾಡೊ ಮನದಾಸೆ ಉಬ್ಬಿ |
ಬಡಿದಿತ್ತು ರೆಕ್ಕೆಯ,
ಹರಡಿತ್ತು ಪುಕ್ಕವ
ಹಾರಲಾಗದೆ ಏರಲಾಗದೆ ಕಂಡಿತ್ತು ನೋವ ||
ಆಗಲ್ಲಿ ಕಂಡಿತ್ತು ಈಜಾಡೊ ಹಂಸ
ನೀರನ್ನು ಹೊರಚಿಮ್ಮಿ ನಲಿದಾಡೊ ಹಂಸ |
ತಾನೊಮ್ಮೆ ನೀರಲ್ಲಿ ಈಜಾಡೊ ಆಸೆ
ಗರಿಬಿಚ್ಚಿ ನೀರಲ್ಲೇ ನಲಿದಾಡೊ ಆಸೆ ||
ಅತ್ತಿತ್ತ ನೋಡುತ್ತ ಮರೆತಿತ್ತು ಮಳೆಯ
ಸುತ್ತೆಲ್ಲ ಇರುವ ಸೊಗಸಾದ ಕಳೆಯ |
ಮುಂದೆಂದೋ ಇರುವ ಸುಖಕೆಂದು ಹಂಬಲಿಸಿ
ಮರೆತಿತ್ತು ಇಂದಿನ ಸಂತಸದ ಬಗೆಯ ||
nice one
ಪ್ರತ್ಯುತ್ತರಅಳಿಸಿthanku :)
ಅಳಿಸಿssuperb
ಪ್ರತ್ಯುತ್ತರಅಳಿಸಿthanku very much... ಯಾರು ಈ ಅನಾಮಧೇಯ...... ????
ಅಳಿಸಿthanks :D
ಪ್ರತ್ಯುತ್ತರಅಳಿಸಿNice one. Keep writing
ಪ್ರತ್ಯುತ್ತರಅಳಿಸಿthanku :)
ಅಳಿಸಿnice one vasuki....
ಪ್ರತ್ಯುತ್ತರಅಳಿಸಿthanku :)
ಅಳಿಸಿGood one Vasuki...:)
ಪ್ರತ್ಯುತ್ತರಅಳಿಸಿthanku sandhyakka :)
ಅಳಿಸಿ